ಗುರುವಾರ, ಅಕ್ಟೋಬರ್ 29, 2015

ರಾಜ್ಯೋತ್ಸವ ಆಚರಣೆಗೆ ಆಮಂತ್ರಣ


ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮಗಳು ನವಂಬರ್ ೧ರಿಂದ ಆರಂಭಗೊಳ್ಳುತ್ತಿದ್ದು ಸಹೃದಯರೆಲ್ಲರೂ ಪಾಲ್ಗೊಂಡು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.

ನವಂಬರ್ ೧ ರ ಕಾರ್ಯಕ್ರಮಗಳು
ಬೆಳಿಗ್ಗೆ: ೭.೩೦-೦೮.೦೦ ಗಂಟೆಗೆ ಧ್ವಜಾರೋಹಣ
ಬೆಳಿಗ್ಗೆ ೧೦.೦೦ ಗಂಟೆಯಿಂದ ಅಪರಾಹ್ನ ೦೧.೦೦ ಗಂಟೆಯವರೆಗೆ ಕಲೆ, ಕರಕುಶಲ, ಛಾಯಾಚಿತ್ರ ಮತ್ತು ಚಿತ್ರಕಲೆ ಪ್ರದರ್ಶನ (೬ ರಿಂದ ೧೬ ವರ್ಷದವರಿಗೆ ಮಾತ್ರ)

ಸೂಚನೆ:
·      ನವಂಬರ್ ತಿಂಗಳಲ್ಲಿ ಪ್ರತಿ ವಾರದ ಕೊನೆಗೆ ಒಂದೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿವರಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು.
·      ಕಾರ್ಯಕ್ರಮದ ಆಚರಣೆಯ ಕೊನೆಯದಾಗಿ ಸಾಂಸ್ಕೃತಿಕ ಸಂಜೆಯನ್ನು ಏರ್ಪಡಿಸಲಾಗುತ್ತದೆ.
·      ಸಹೃದಯರೆಲ್ಲರೂ ತಾವಾಗಿಯೆ ಮುಂದೆಬಂದು ಹೆಸರನ್ನು ನೊಂದಾಯಿಸಿಕೊಳ್ಳಲು ವಿನಂತಿಸುತ್ತೇವೆ.
·      ಎಲ್ಲರು ತನು-ಮನ-ಧನ ಸಹಾಯ ನೀಡಿ ಕನ್ನಡದ ನಾಡಹಬ್ಬವನ್ನು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.
·      ದಿನಾಂಕ ೦೨-೦೪ ನವಂಬರ್ ರಾತ್ರಿ ೭-೮ ಗಂಟೆಯ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸುವುದರ ಪ್ರಯುಕ್ತ ಚರ್ಚಿಸಲು ಎಲ್ಲರೂ ಮಲ್ಟಿ ಪರ್ಪಸ್ ಹಾಲ್ ಬಳಿ ಸೇರಲು ಕೋರಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ